ಭಾಗ 2: ಬೈಬಲ್ ಪ್ರಕಾರ ಉಪವಾಸ ಮಾಡುವ ವಿಭಿನ್ನ ರೀತಿಗಳು
ಉಪವಾಸ ಎಂದರೆ ಟಿವಿ ನೋಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಾ ಅಥವಾ ಲೋಕಸಂಬಂಧಿತ ಚಟುವಟಿಕೆಗಳಲ್ಲಿ ತೊಡಗುತ್ತಾ ಕೆಲವು ಸಮಯ ಊಟ ಬಿಟ್ಟು ಬಿಡುವುದಲ್ಲ. ಆದರೆ ಅದು ನಮ್ಮನ್ನು ಸಂಪೂರ್ಣವಾಗಿ ಕರ್ತನಿಗೆ ಶರಣಾಗಿಸುವುದು — ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡುವುದು ಮತ್ತು ಪ್ರಾರ್ಥನೆ, ಆರಾಧನೆ ಹಾಗೂ ದೇವರ ಪವಿತ್ರ ವಾಕ್ಯವನ್ನು ಧ್ಯಾನಿಸುವುದರ ಮೂಲಕ ಕರ್ತನೊಂದಿಗೆ ಸಮಯ ಕಳೆಯುವುದು.
ಈಗ ನಾವು ಉಪವಾಸ ಎಂದರೇನು ಮತ್ತು ಅದು ಏಕೆ ಮುಖ್ಯವೆಂಬುದನ್ನು ಅರ್ಥಮಾಡಿಕೊಂಡಿರುವುದರಿಂದ, ಬೈಬಲ್‌ನಲ್ಲಿ ಕಾಣುವ ಉಪವಾಸದ ವಿಭಿನ್ನ ರೀತಿಗಳು ಮತ್ತು ಅವುಗಳ ನಂತರ ಬಂದ ಶಕ್ತಿಶಾಲಿ ಫಲಿತಾಂಶಗಳನ್ನು ನೋಡೋಣ.
ಬೈಬಲ್‌ನಲ್ಲಿ ಉಪವಾಸದ ವಿಭಿನ್ನ ವಿಧಾನಗಳು
- ಚಿಕ್ಕ ಉಪವಾಸ (ಒಂದು ದಿನ ಅಥವಾ ಕೆಲವು ಗಂಟೆಗಳು / 1 ದಿನ ಉಪವಾಸ):
ನ್ಯಾಯಾಧಿಪತಿಗಳ ಪುಸ್ತಕದಲ್ಲಿ, ಇಸ್ರಾಯೇಲ್ಯರು ದೇವರಿಂದ ತ್ವರಿತ ದಾರಿದರ್ಶನ ಪಡೆಯಲು ಸಂಜೆಯವರೆಗೆ ಒಂದು ದಿನ ಉಪವಾಸ ಮಾಡಿದರು (ನ್ಯಾಯಾಧಿಪತಿಗಳು 20:26).
ಪರಿಣಾಮವಾಗಿ — ದೇವರು ಅವರಿಗೆ ಶತ್ರುಗಳ ಮೇಲೆ ವಿಜಯವನ್ನು ನೀಡಿದನು. - ಸಂಪೂರ್ಣ ಉಪವಾಸ (ಆಹಾರವೂ ನೀರೂ ಇಲ್ಲ / 3 ದಿನ ಉಪವಾಸ):
ಶೂಷಾ ಪಟ್ಟಣದಲ್ಲಿ ಎಸ್ತೇರ್ ಮತ್ತು ಯೆಹೂದ್ಯರು ತಮ್ಮ ಜನರನ್ನು ರಕ್ಷಿಸಲು ದೇವರ ಹಸ್ತಕ್ಷೇಪಕ್ಕಾಗಿ 3 ದಿನ ಮತ್ತು 3 ರಾತ್ರಿಗಳು ನಿರಂತರವಾಗಿ ಉಪವಾಸ ಮಾಡಿದರು (ಎಸ್ತೇರ್ 4:16).
ಪರಿಣಾಮವಾಗಿ — ದೇವರು ಯೆಹೂದ್ಯರನ್ನು ಉಳಿಸಿದನು ಮತ್ತು ಹಾಮಾನನು ಸೋಲಿಸಲ್ಪಟ್ಟನು. - ಭಾಗಶಃ ಉಪವಾಸ (ಸರಳ ಆಹಾರ — ಹಣ್ಣುಗಳು, ತರಕಾರಿಗಳು / 21 ದಿನ ಉಪವಾಸ):
ದಾನಿಯೇಲ್ ಆತ್ಮೀಯ ಅರಿವು ಪಡೆಯಲು ಮೂರು ವಾರಗಳ ಕಾಲ ರುಚಿಕರವಾದ ಆಹಾರ, ಮಾಂಸ ಮತ್ತು ದ್ರಾಕ್ಷಾರಸವನ್ನು ಸೇವಿಸದೆ ಉಪವಾಸ ಮಾಡಿದನು; (ದಾನಿಯೇಲ್ 10:2–3).
ಪರಿಣಾಮವಾಗಿ — ದೇವದೂತರ ದರ್ಶನ ಮತ್ತು ಆತ್ಮೀಯ ಅರಿವು ಅವನಿಗೆ ದೊರೆಯಿತು. - ದೀರ್ಘಕಾಲದ ಉಪವಾಸ (ಅನೇಕ ದಿನಗಳು / 40 ದಿನ ಉಪವಾಸ):
ಮೋಶೆ ದೇವರ ದಾರಿದರ್ಶನ ಮತ್ತು ಒಡಂಬಡಿಕೆಗೆಗಾಗಿ 40 ದಿನ ಉಪವಾಸ ಮಾಡಿದನು (ನಿರ್ಗಮ 34:28).
ಪರಿಣಾಮವಾಗಿ — ಮೋಶೆಗೆ ಧರ್ಮಶಾಸ್ತ್ರದ ಸೂಚನೆಗಳು ಮತ್ತು ಒಡಂಬಡಿಕೆ ದೊರೆಯಿತು.
ಏಲೀಯನು ದೈವಿಕ ಭೇಟಿಯ ಮತ್ತು ಪ್ರಕಟಣೆಗೆಗಾಗಿ 40 ದಿನ ಉಪವಾಸ ಮಾಡಿದನು (1 ರಾಜರು 19:8).
ಪರಿಣಾಮವಾಗಿ — ದೇವರು ಏಲೀಯನನ್ನು ನವೀಕರಿಸಿದನು ಮತ್ತು ಸಣ್ಣ, ಮೃದುವಾದ ಧ್ವನಿಯಲ್ಲಿ ಅವನೊಡನೆ ಮಾತನಾಡಿದನು.
ಯೇಸು ತನ್ನ ಸೇವೆಗೆ ತಯಾರಿಗಾಗಿ ಮತ್ತು ಸೈತಾನನ ಸೆಳೆತಗಳು ಜಯಿಸಲು 40 ದಿನ ಉಪವಾಸ ಮಾಡಿದನು (ಮತ್ತಾಯ 4:2; ಲೂಕ 4:2).
ಪರಿಣಾಮವಾಗಿ — ಯೇಸು ಆತ್ಮದ ಶಕ್ತಿಯಲ್ಲಿ ಗಲಿಲಾಯಕ್ಕೆ ಹಿಂತಿರುಗಿ, ಕಠಿಣ ಪರೀಕ್ಷೆಗಳನ್ನು ಎದುರಿಸಿ, ಅದ್ಭುತಗಳನ್ನು ಮಾಡಿದನು, ಉಪಮೆಗಳ ಮೂಲಕ ಸುವಾರ್ತೆಯನ್ನು ಸಾರಿದನು ಮತ್ತು ಅವನ ಬಗ್ಗೆ ಸುದ್ದಿ ಸಂಪೂರ್ಣ ಪ್ರದೇಶದಲ್ಲಿ ಹರಡಿತು (ಲೂಕ 4:14). - ನಿಯಮಿತ ಉಪವಾಸ (ಜೀವನಶೈಲಿ ಉಪವಾಸ):
ಅನ್ನಾ (ಪ್ರವಾದಿನಿ) ದಿನವೂ ರಾತ್ರಿಯೂ ದೇವರನ್ನು ಆರಾಧಿಸುತ್ತಾ, ಉಪವಾಸ ಮತ್ತು ಪ್ರಾರ್ಥನೆಯ ಮೂಲಕ ನಿರಂತರ ಆತ್ಮೀಯ ಬೆಳವಣಿಗೆಯನ್ನು ಹೊಂದಿದ್ದಳು (ಲೂಕ 2:37–38).
ಪರಿಣಾಮವಾಗಿ — ಅವಳು ಯೇಸುವನ್ನು ಕಂಡು, ಅವನ ಬಗ್ಗೆ ಸಾಕ್ಷ್ಯವನ್ನೂ ಹೇಳಿದಳು. - ವೈಯಕ್ತಿಕ ಉಪವಾಸ (ವೈಯಕ್ತಿಕವಾಗಿ):
ದಾವೀದನು ವೈಯಕ್ತಿಕ ಪಶ್ಚಾತ್ತಾಪ ಮತ್ತು ತನ್ನ ಪ್ರಾರ್ಥನೆಗಳಿಗೆ ಉತ್ತರಕ್ಕಾಗಿ ಉಪವಾಸ ಮಾಡಿದನು (ಕೀರ್ತನೆ 35:13).
ಪರಿಣಾಮವಾಗಿ — ದೇವರೊಂದಿಗೆ ಅವನ ಸಂಬಂಧ ಪುನಃ ಸ್ಥಾಪನೆಯಾಗಿ ಬಲಿಷ್ಠವಾಯಿತು. - ಸಮೂಹ ಉಪವಾಸ (ಗುಂಪು / ಸಭೆಯ ಉಪವಾಸ):
ಯೋನನ ಸಂದೇಶವನ್ನು ಕೇಳಿದ ನಂತರ, ನಿನೆವೆ ಪಟ್ಟಣದ ಸಂಪೂರ್ಣ ಜನರು ದೇವರನ್ನು ನಂಬಿ, ಪಶ್ಚಾತ್ತಾಪ ಮತ್ತು ರಾಷ್ಟ್ರೀಯ ಬಿಡುಗಡೆಗಾಗಿ ಸಮೂಹವಾಗಿ ಉಪವಾಸ ಮಾಡಿದರು (ಯೋನ 3:5).
ಪರಿಣಾಮವಾಗಿ — ದೇವರು ಆ ಪಟ್ಟಣವನ್ನು ನಾಶದಿಂದ ಉಳಿಸಿದನು.
ಬಹುಸಾರಿ ನಮ್ಮೊಳಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಆಗ “ದೇವರು ನನ್ನೊಂದಿಗೆ ಇಲ್ಲವೇ?” ಅಥವಾ “ದೇವರು ನನ್ನ ಪ್ರಾರ್ಥನೆಗಳನ್ನು ಕೇಳುತ್ತಿಲ್ಲವೇ?” ಎಂಬ ಭಾವನೆ ಬರಬಹುದು. ಆ ತೀರ್ಮಾನಕ್ಕೆ ಬರುವ ಮೊದಲು — ದೇವರು ಬಯಸುವ ರೀತಿಯಲ್ಲಿ, ಶಾಸ್ತ್ರಗಳ ಪ್ರಕಾರ ನಾವು ನಿಜವಾಗಿಯೂ ಉಪವಾಸ ಮಾಡುತ್ತಿದ್ದೇವೆಯೇ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಿದ್ದೇವೆಯೇ? ನೀವು ದೇವರ ಬಳಿಗೆ “ನಾನು ಇನ್ನೇನು ಮಾಡಬೇಕು?” ಎಂದು ಕೇಳಿದ್ದರೂ ಇರಬಹುದು.
ಮೊದಲ ಹೆಜ್ಜೆ ಇಡಿ — ಅತಿಯಾಗಿ ಯೋಚಿಸಬೇಡಿ, ಉಪವಾಸವನ್ನು ಪ್ರಾರಂಭಿಸಿ. ನೀವು ಯಾವ ರೀತಿಯ ಉಪವಾಸ ಮಾಡುತ್ತೀರಿ ಅಥವಾ ಎಷ್ಟು ದಿನ ಮಾಡುತ್ತೀರಿ ಎಂಬುದಕ್ಕಿಂತ, ನೀವು ಉಪವಾಸದ ಸಮಯದಲ್ಲಿ ಏನು ಮಾಡುತ್ತೀರಿ ಮತ್ತು ನಿಮ್ಮ ಸಮಯವನ್ನು ಹೇಗೆ ಕಳೆಯುತ್ತಿರಿ ಎಂಬುದೇ ನಿಜವಾಗಿ ಮುಖ್ಯ.
ನೆನಪಿರಲಿ;
- ಪ್ರಾರ್ಥನೆಯಿಲ್ಲದ ಉಪವಾಸ = ಆತ್ಮೀಯ ಹಸಿವು — ಪರಿವರ್ತನೆ ಅಲ್ಲ.
- ಉಪವಾಸ ದೇವರನ್ನು ಹುಡುಕುವುದಕ್ಕಾಗಿ — ದೇಹವನ್ನು ಹಾನಿಗೊಳಿಸಲು ಅಲ್ಲ.
- ಉಪವಾಸ ನಿಮ್ಮ ಮತ್ತು ದೇವರ ನಡುವೆ — ಸಾಮಾಜಿಕ ಮಾಧ್ಯಮಗಳಿಗಾಗಿ ಅಲ್ಲ.
ಪೂರ್ಣ ಹೃದಯದಿಂದ ದೇವರನ್ನು ಹುಡುಕಿ — ಅವನು ಪ್ರತಿಯಾಗಿ ಏನು ಮಾಡುವನು ಎಂಬುದನ್ನು ನೋಡಿ.
ತನ್ನ ವಾಗ್ದಾನಗಳನ್ನು ಎಂದಿಗೂ ಮರೆಯದ ದೇವರು ತನ್ನ ವಾಕ್ಯದ ಮೂಲಕ ನಿಮ್ಮನ್ನು ಆಶೀರ್ವದಿಸಲಿ ಮತ್ತು ಸತ್ಯ ಹಾಗೂ ಶಾಂತಿಯಲ್ಲಿ ನಿಮ್ಮನ್ನು ನಡೆಸಲಿ.
"ಹುಲ್ಲು ಒಣಗುತ್ತದೆ, ಹೂವು ಉದುರುತ್ತದೆ; ಆದರೆ ನಮ್ಮ ದೇವರ ವಾಕ್ಯವು ಸದಾಕಾಲವೂ ಸ್ಥಿರವಾಗಿರುತ್ತದೆ." (ಯೆಶಾಯ 40:8)
.png)
Comments
Post a Comment